ಇರ್ಪು ಜಲಪಾತವು ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿದ್ದು, ಕೇರಳದ ವೈನಾಡು ಜಿಲ್ಲೆಯೊಂದಿಗೆ ಗಡಿರೇಖೆ ಹೊಂದಿದೆ. ಇದೊಂದು ಶುದ್ಧ ನೀರಿನ ಕಿರು ಜಲಪಾತವಾಗಿದ್ದು, ವಿರಾಜಪೇಟೆಯಿಂದ ನಾಗರಹೊಳೆ ಹೆದ್ದಾರಿಯಲ್ಲಿ 48 ಕಿ.ಮೀ ದೂರದಲ್ಲಿದೆ.
ದೂರ : 16 ಕಿ.ಮೀ
ಶ್ರೀ ಮೃತ್ಯುಂಜಯ ಸ್ವಾಮಿ ದೇವಾಲಯ
ವಿರಾಜಪೇಟೆ ತಾಲ್ಲೂಕಿನ ಬಡಿಗೇರಕೇರಿಯೆಂಬ ಚಿಕ್ಕ ಗ್ರಾಮದಲ್ಲಿ ಶ್ರೀ ಮೃತ್ಯುಂಜಯ ಸ್ವಾಮಿ ದೇವಾಲಯವಿದೆ.
ದೂರ : 18 ಕಿ.ಮೀ
ತಿರುನೆಲ್ಲಿ ಮಹಾವಿಷ್ಣು ದೇವಾಲಯ
ಶ್ರೀ ಮಹಾವಿಷ್ಣುವಿನ ಪ್ರಾಚೀನ ಕಾಲದ ತಿರುನೆಲ್ಲಿ ದೇವಾಲಯವು ಕೇರಳದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ಪಕ್ಕದಲ್ಲಿದ್ದು, ಕರ್ನಾಟಕದ ಗಡಿರೇಖೆಗೆ ಹತ್ತಿರದಲ್ಲಿದೆ.
ದೂರ : 26 ಕಿ.ಮೀ
ಟೀ ಎಸ್ಟೇಟ್
ಪರ್ವತಗಳ ತಾಜಾ ಗಾಳಿ ಹಾಗೂ ಶ್ರೀಮಂತ ಹಸಿರು ರಾಶಿಯ ನಡುವೆ ಸರಿಸುಮಾರು 1200 ಎಕರೆ ಪ್ರದೇಶದಲ್ಲಿ ಹರಡಿರುವ ಟೀ ತೋಟದಲ್ಲಿ ಅನಿಯಮಿತ ಕಾಲ ನೀರವ ಕಾಲ್ನಡಿಗೆಯಲ್ಲಿ ತೆರಳುವಾಗ ಮಲೆ ಸೀಟಿ ಸಿಳ್ಳಾರ, ಮಲೆ ಮಂಗಟ್ಟೆ ಪಕ್ಷಿಗಳ ನಿನಾದ ಕೇಳುತ್ತದೆ.
ದೂರ : 14 ಕಿ.ಮೀ
ವೈನಾಡು ವನ್ಯಜೀವಿಧಾಮ
ವೈನಾಡು ವನ್ಯಧಾಮವು ಸಮೃದ್ಧ ಹಸಿರು ರಾಶಿ ಹಾಗೂ ವನ್ಯಜೀವಿಗಳಿಂದ ಕೂಡಿದೆ. ಈ ವನ್ಯಧಾಮವು ಹಲವಾರು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ.
ದೂರ : 15 ಕಿ.ಮೀ
ಕಬಿನಿ ಅಣೆಕಟ್ಟು
ಕಬಿನಿ ಅಣೆಕಟ್ಟನ್ನು ಮೈಸೂರು ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟು 696 ಮೀ ಉದ್ದವಾಗಿದ್ದು 1974ರಲ್ಲಿ ಕಟ್ಟಲಾಗಿದೆ. 55 ಎಕರೆ ವಿಶಾಲವಾದ ಜಲಾನಯನ ಪ್ರದೇಶ ಹೊಂದಿರುವ ಕಬಿನಿ ಅಣೆಕಟ್ಟು ಕಾಡು, ನದಿ, ಕೆರೆ ಮತ್ತು ಗಿರಿಶ್ರೇಣಿಗಳನ್ನು ಆವರಿಸಿಕೊಂಡಿದೆ.
ದೂರ : 15 ಕಿ.ಮೀ
ಚಿಕ್ಕದೇವಮ್ಮನ ಬೆಟ್ಟ
ಪವಿತ್ರವಾದ ಚಿಕ್ಕದೇವಮ್ಮ ಬೆಟ್ಟವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಕುಂದೂರು ಗ್ರಾಮದಲ್ಲಿದೆ. ಬೆಟ್ಟದ ತಪ್ಪಲಿನಲ್ಲಿ ಚಿಕ್ಕದೇವಮ್ಮನ ದೇವಾಲಯವಿದೆ. ಈ ಬೆಟ್ಟವು ಕಾಡಿನಿಂದ ಸುತ್ತುವರಿದಿರುವುದರಿಂದ ಆನೆ, ಚಿರತೆ, ಜಿಂಕೆ ಮತ್ತು ಹಲವಾರು ಕಾಡು ಪ್ರಾಣಿಗಳು ಕಾಣಸಿಗುತ್ತವೆ
ದೂರ : 35 ಕಿ.ಮೀ
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಫಾರೆಸ್ಟ್ ಕ್ಯಾಂಪಸ್ ಹಳೇ ಬಿ.ಎಂ ರಸ್ತೆ, ಹುಣಸೂರು - 571105 Ph: 08222-252041 Email – [email protected]